ಕಮಲಪತಿವಿಠ್ಠಲರು
ಅಂಬುಜಾಕ್ಷಿ
170
ಜಗನ್ನಾಥದಾಸರ ಸ್ತೋತ್ರ
ಅಂಬುಜಾಕ್ಷಿ ಸ್ತಂಭದಿಹನ್ಯಾರೇ - ಸಾರೇ ಪ
ನಂಬಿ ಭಜಿಸುವ ಭಕುತರ ಮನದಹಂಬಲ ನೀಡುವರೆ - ನೀರೇ ಅ.ಪ
ಸುರರೊಡೆಯನೋಲ್ ಪರಿಪರಿಯಲೈ- ಶ್ವರ್ಯದಿಂ ರಾಜಿಸುವರ್ಯಾರೇಹರಿಕಥಾಮೃತ ಗ್ರಂಥ ವಿರಚಿಸಿಧರಣಿ ಸುರರುದ್ಧರಿಸಿದವರೆ 1
ಫುಲ್ಲಲೋಚನೆ ಬಲ್ಲೆಯಾ ಇವ -ರಿಲ್ಲಿರುವ ಕಾರಣವಿದೇನೆಫುಲ್ಲನಾಭನ ಪುಡುಕುತಲೀಪ್ರಹ್ಲಾದನನುಜ ಸಹ್ಲಾದರಿವರೆ 2
ಜಲಜ ತುಳಸಿಮಣಿ ಸುಮಾಲಿಕೆಗಳದಿ ಧರಿಸಿಹನ್ಯಾರೆ - ನೀರೇಕಲಿಯುಗದಿ ಕಮಲಾಪತಿ ವಿ- ಠಲನ ಒಲಿಸಿದಿಳೆಯೊಳಗೆ ಮೆರೆವರೆ 3ಹಾಡಿನ ಹೆಸರು : ಅಂಬುಜಾಕ್ಷಿ
ಹಾಡಿದವರ ಹೆಸರು : ವಸುಧಾ ಕೇಶವ
ರಾಗ : ವಾಸಂತಿ
ತಾಳ : ರೂಪಕ ತಾಳ
ಶೈಲಿ :
ಸಂಗೀತ ನಿರ್ದೇಶಕರು : ವಾಗೀಶ್
ಸ್ಟುಡಿಯೋ : ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ