ಗುರುರಾಮವಿಠಲ
ಅಂಟಿ ಅಂಟದ ಹಾಗೆ ಇರಬೇಕು

ಲೋಕನೀತಿ (ಅ)
195
ಅಂಟಿ ಅಂಟದ ಹಾಗೆ ಇರಬೇಕು ಪ
ಈ ತಂಟೆ ಸಂಸಾರದ ಬುದ್ಧಿ ಉಂಟಾದವರಿಗೆಲ್ಲಾ ಅ.ಪ
ಎಂಟು ಮದಗಳನ್ನು ಬಿಡಬೇಕು | ಹದಿ-
ನೆಂಟನೇ ತತ್ವ ತಿಳಿಯಬೇಕು
ಮೂರೆಂಟು ಜಯಿಸಿ ನಿಜನೆಂಟನ ಕಂಡವನ
ಭಂಟನಾಗಿ ವೈಕುಂಠ ಸೇರುವದಕೆ 1
ಶತ್ರುಗಳಾರ್ವರ ಗೆಲ್ಲಬೇಕು | ನಿಜ-
ಮಿತ್ರರಾರ್ವರೊಳು ನಿಲ್ಲಬೇಕು
ರಾತ್ರಿ ಹಗಲು ಪತ್ನೀಪುತ್ರರೊಡನೆ ಕಮಲ-
ಪತ್ರದಿ ನೀರಿದ್ದ ರೀತಿಯಿಂದಲಿ ತಾನು 2
ಮಾನವಮಾನ ಒಂದಾಗಬೇಕು | ಅನು-
ಮಾನವಿಲ್ಲದೆ ತಿರುಗಲುಬೇಕು
ಇನ್ನೇನಾದರು ಗುರುರಾಮವಿಠಲನಾ-
ಧೀನನೆನುತ ಮದ್ದಾನೆಯಂದದಿ ತಾನು 3ಹಾಡಿನ ಹೆಸರು : ಅಂಟಿ ಅಂಟದ ಹಾಗೆ ಇರಬೇಕು
ಹಾಡಿದವರ ಹೆಸರು : ಪಲ್ಲವಿ ಎಂ. ಡಿ.
ರಾಗ :
ತಾಳ :
ಶೈಲಿ :
ಸಂಗೀತ ನಿರ್ದೇಶಕರು : ಪ್ರಸಾದ್ ಎನ್. ಎಸ್.
ಸ್ಟುಡಿಯೋ : ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ