ಅಂಜಿಕ್ಯಾಕೆನಗಂಜಿಕಿ

3 ಆತ್ಮ ನಿವೇದನೆ
190
ಅಂಜಿಕ್ಯಾಕೆನಗಂಜಿಕೆ
ಕಂಜನಾಭ ಶ್ರೀನಿವಾಸನ ದಯವಿರಲು ಪ.
ಅಶನ ವಸನವನ್ನು ಕುಳಿತಲ್ಲೆ ನಡೆಸುವ
ನಿಶಿದಿನ ನೀಚರಾಧೀನ ಮಾಡದೆ
ಹಸನಾಗಿ ತನ್ನಂಘ್ರಿ ನೆರಳೊಳು ಬಚ್ಚಿಟ್ಟು
ಕುಶಲದಿ ಸಾಕುವ ದೊರೆಯ ನಂಬಿದ ಬಳಿಕ 1
ಹುಲ್ಲು ಕಚ್ಚಿ ಕಲ್ಲು ಹೊತ್ತು ಧನವನುಳ್ಳ
ಕ್ಷುಲ್ಲ ಜೀವರನೆಲ್ಲ ಕಾಯುವ ಶಕ್ತಿ
ಎಲ್ಲ ವ್ಯವಹಾರವ ಮಾಡುವ ಬಲ ನನ
ಗಿಲ್ಲೆಂದು ಆಯಾಸಬಡಲೀಸದವನಿರೆ 2
ಆವಾವ ಕಾಲದಿ ಆವಾವ ದೇಶದಿ
ಸೇವೆಗೆ ನಾ ತಪ್ಪೆ ಕೃಪೆ ತಪ್ಪಿಸ
ಭಾವಿಕರೊಡೆಯ ಪ್ರಸನ್ವೆಂಕಟಾದ್ರೀಶ
ಸಾವು ಕಳೆದು ಜೀವಕಾಶ್ರಯನಾಗಿರೆ3ಹಾಡಿನ ಹೆಸರು : ಅಂಜಿಕ್ಯಾಕೆನಗಂಜಿಕಿ
ಹಾಡಿದವರ ಹೆಸರು : ವಿದ್ಯಾ ಎಂ. ಎಸ್. ಮತ್ತು ಚೈತ್ರಾ ಕೆ. ಆರ್.
ರಾಗ : ಜುಂಜೂಟಿ
ತಾಳ : ತ್ರಿಶ್ರ ನಡೆ
ಶೈಲಿ :
ಸಂಗೀತ ನಿರ್ದೇಶಕರು : ರಮಾಮಣಿ ಆರ್. ಎ.
ಸ್ಟುಡಿಯೋ : ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ