ಲಕ್ಷ್ಮೀನಾರಯಣರಾಯರು
ಅಚ್ಚರಿಯೊಳಚ್ಚರಿಯು ಅಚ್ಯುತನ
220
ಅಚ್ಚರಿಯೊಳಚ್ಚರಿಯು ಅಚ್ಯುತನ ನಾಮವಿದು
ತುಚ್ಛ ಬುದ್ಧಿಯ ಬಿಟ್ಟು ಎಚ್ಚೆತ್ತು ನೋಡೊ ಪ

ನಿಧಿಯು ತನ್ನೆದುರಿಗಿರೆ ವದರಿ ದುರ್ಯೋಧನನು
ಮದಡನಾದನು ಬರಿದೆ ದಳವ ಕೊಂಡು
ಸದಮಲಾತ್ಮನ ದಿವ್ಯ ಪದವನರ್ಜುನ ಪಿಡಿದು
ಮುದದಿ ಭಾಗ್ಯವ ಪಡೆದನದ್ಭುತವ ನೋಡ 1

ಹರಿಯ ಯೋಗದ ಸಿರಿಯು ಇರುವ ನಿಜವರಿಯದೆ
ಕುರುಡನಣುಗನು ಜರಿದು ಹಾಳಾದನು
ಉರುತರದ ಭಕ್ತಿಯಿಂದೆರಗಿ ಕರಗಳ ಮುಗಿದು
ನರ ತನ್ನ ಹೆಸರನ್ನು ಸಾರ್ಥಕವಗೈದ 2

ನೀಚಯುಕ್ತಿಗಳಿಂದ ಗೋಚರಕೆ ಬಹನಲ್ಲ
ವಾಚಾಮಗೋಚರನು ಶ್ರೀಕಾಂತನು
ಕೀಚಕಾರಿ ಪ್ರಿಯನ ಶ್ರೀ ಚರಣ ಭಕ್ತಿ ಭವ-ಮೋಚನಕೆ ಸೂಚನೆಯು ಆಚರಿಸಿ ನೋಡೋ 3ಹಾಡಿನ ಹೆಸರು : ಅಚ್ಚರಿಯೊಳಚ್ಚರಿಯು ಅಚ್ಯುತನ
ಹಾಡಿದವರ ಹೆಸರು : ನಂದಿನಿ
ರಾಗ : ಸೂತ್ರಧಾರ
ತಾಳ : ಮಿಶ್ರ ಛಾಪು ತಾಳ
ಶೈಲಿ :
ಸಂಗೀತ ನಿರ್ದೇಶಕರು : ನಾಗಮಣಿ ಶ್ರೀನಾಥ್ ಎಂ.
ಸ್ಟುಡಿಯೋ : ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ