ಗುರುಜಗನ್ನಾಥದಾಸರು
ಅಂಬಾ ನಿನ್ನಯ ಪಾದ
ಪಾರ್ವತಿ
78
ಅಂಬಾ ನಿನ್ನಯ ಪಾದ ಅಂಬುಜಯುಗ ಮನ
ಅಂಬುಜಾದೊಳಗತಿ ಸಂಭ್ರಮದಿಂದಲಿ
ನಂಬಿ ಭಜಿಪನ ಚಿತ್ತದಿ ಇಂಬುಗೊಂಡಿರುವೋ
ಬಿಂಬರೂಪನ ತೋರೆ ಅಂಬುಜಾಂಬಕೆ
ಶಂಭುದೇವನ ಪ್ರಿಯೆ - ದಂಭೋಲಿಧರವಿನುತೆ
ಅಂಬರಮಾನಿಮಾತೆ ಪ್ರಖ್ಯಾತೆ
ಶುಂಭನಿಶುಂಭಾಸುರ ಕದಂಬ ಸಂಗ್ರಾಮ ಹಾರೀ
ಕುಂಭಿಣಿಧರಜಾತೆ ರಾಜಿತೆ
ಕಂಬುಚಕ್ರಪಾಣಿ ವಿಶ್ವಂಭರ ಮೂರುತಿ
ಅಂಬುಜಾಪತಿ ನಮ್ಮ ಗುರುಜಗನ್ನಾಥವಿಠಲನ್ನ
ಕಾಂಬುವತೆರ ಮಾಡೆ ಕರುಣಾಕÀರಳೆಹಾಡಿನ ಹೆಸರು : ಅಂಬಾ ನಿನ್ನಯ ಪಾದ
ಹಾಡಿದವರ ಹೆಸರು : ಆನೂರು ಅನಂತ ಕೃಷ್ಣಶರ್ಮ
ರಾಗ : ರಾಗಮಾಲಿಕೆ
ತಾಳ : -
ಶೈಲಿ :
ಸಂಗೀತ ನಿರ್ದೇಶಕರು : ರಾಜು ಅನಂತಸ್ವಾಮಿ
ಸ್ಟುಡಿಯೋ : ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ